ಜೀವನ ಪರಿಚಯ

ಜನನ: ಶಿಕ್ಷಕ ನಂದಳಿಕೆ ಸುಬ್ಬರಾವ್ ಮತ್ತು ಶ್ರಿಮತಿ ಗಿರಿಜಮ್ಮ ದಂಪತಿಗಳ ಮಗನಾಗಿನಂದಳಿಕೆಯಲ್ಲಿ 12-03-1953ರಂದು ಜನನ.
ಓದು: ನಂದಳಿಕೆ, ಬೆಳ್ಮಣ್ಣು, ಮಂಗಳೂರು.
ವಿದ್ಯಾರ್ಹತೆ: ಬಿ.ಎ.ಪದವಿ, ಸರಕಾರಿ ಕಾಲೇಜು, ಮಂಗಳೂರು, ಸಾರ್ವಜನಿಕ ಸಂಪರ್ಕ/ಪತ್ರಿಕೋದ್ಯಮದಲ್ಲಿ ಡಿಪ್ಲೊಮ, ಮೈಸೂರು ವಿ.ವಿ.
ವೃತ್ತಿ: ನಿವೃತ್ತ ಅಧಿಕಾರಿ, ಕರ್ಣಾಟಕ ಬ್ಯಾಂಕ್, ಪ್ರಾದೇಶಿಕ ಕಚೇರಿ, ಮಂಗಳೂರು-575 003.
ಹವ್ಯಾಸ: ಸಾಹಿತ್ಯ, ಸಾರ್ವಜನಿಕ ಸಂಪರ್ಕ, ಅಭಿವೃದ್ಧಿ ಪತ್ರಿಕೋದ್ಯಮ, ಗ್ರಾಮಾಭ್ಯುದಯ, ಫೋಟೋಗ್ರಾಫಿ.
ಸಾಧನೆ
ನಂದಳಿಕೆಯಲ್ಲಿ 1958ರಲ್ಲಿ ನಂದಳಿಕೆ ಚಾವಡಿ ಅರಮನೆ ಏನ್ ಸುಂದರಾಂಮ್ ಹೆಗ್ಡೆ , ನಂದಳಿಕೆ ಭಾಸ್ಕರ ರಾವ್, ಎಂ ಅನಂತ್ ಪದ್ಮನಾಭ, ಏನ್ ಪದ್ಮನಾಭ ರಾವ್ ಇವರುಗಳ ಮಾರ್ಗ ದರ್ಶನದ ದಿಂದ ಶಂಕುಸ್ಥಾಪನೆಯಾಗಿ ನೆನೆಗುದಿಗೆ ಬಿದ್ದಿದ್ದ ಮುದ್ದಣ ಸ್ಮಾರಕ ಮಂದಿರ ಕಲ್ಪನೆಯ ಕೂಸಿಗೆ ಜೀವದಾನ ಮಾಡಲು 1979ರಲ್ಲಿ ಮುದ್ದಣ ಸ್ಮಾರಕ ಮಿತ್ರಮಂಡಳಿಯ ಸ್ಥಾಪನೆ. ಸ್ಥಾಪಕಾಧ್ಯಕ್ಷ ಏನ್ ದಿವಾಕರ ಶೆಟ್ಟಿ, ಏನ್ ನಾರಾಯಣ ಭಟ್ ಮತ್ತು ಮಿತ್ರಮಂಡಳಿಯ ಸದಸ್ಯರು ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮಹಾಲಿಂಗೇಶ್ವರ ಶಾಲಾ ಸಂಚಾಲಕರ ಮತ್ತು ಶಿಕ್ಷಕರ ಹಾಗೂ ಊರವರ ಸಹಕಾರದಿಂದ ಮುದ್ದಣನ ಹೆಸರಿಗೆ ತಾರಕ ಮಾಂತ್ರಿಕಶಕ್ತಿ ನೀಡಿ ಕುಗ್ರಾಮವಾಗಿದ್ದ ನಂದಳಿಕೆಗೆ ಡಾಮರು ರಸ್ತೆ, ಗ್ರಂಥಾಲಯ, ವಿದ್ಯುದ್ದೀಪ, ಆಸ್ಪತ್ರೆ, ದೂರವಾಣಿ ಸಂಪರ್ಕ, ಬಸ್ ವ್ಯವಸ್ಥೆಯ ಏರ್ಪಾಡು. ಕೊನೆಗೂ 1987ರಲ್ಲಿ ಕರ್ನಾಟಕಕ್ಕೇ ಅಪೂರ್ವ ಹಾಗೂ ಪ್ರಥಮ ಕವಿ ಸ್ಮಾರಕವಾದ ಸುಮಾರು ಮೂರು ಲಕ್ಷ ವೆಚ್ಚದ ಮುದ್ದಣ ಸ್ಮಾರಕ ಭವನದ ನಿರ್ಮಾಣ ಮತ್ತು ಉದ್ಘಾಟನೆ. 2004ರಲ್ಲಿ ಬೆಳ್ಳಿಹಬ್ಬ ಆಚರಣೆ-25 ಸಾಧಕರಿಗೆ ಸನ್ಮಾನ. 1995ರಿಂದ ಮುದ್ದಣ ಪುರಸ್ಕಾರ ವಿದ್ವತ್ ಸನ್ಮಾನ. ಕಾಂತವರ ಕನ್ನಡ ಸಂಘ ಸ್ಥಾಪಕ ಸಂಘಟನಾ ಕಾರ್ಯದರ್ಶಿಯಾಗಿ 3ದಶಕಗಳ ಸೇವೆ – ಮುದ್ದಣ ಕಾವ್ಯ ಪುರಸ್ಕಾರ ಪ್ರಸ್ತುತ, ಸ್ಮರಣಾ ಸಂಚಿಕೆ, ವಿದ್ವತ್ ಸನ್ಮಾನಗಳಿಗೆ, ಸಂಘದ ಅಧ್ಯಕ್ಷ ಡಾ|.ನಾ.ಮೊಗಸಾಲೆ ಅವರ ನೇತೃವದಲ್ಲಿ ವಿಶೇಷ ಸೇವೆ.
ಪ್ರಶಸ್ತಿ ಪುರಸ್ಕಾರಗಳು
1983ರಲ್ಲಿ ಮಣಿಪಾಲ ಜೇಸಿಸ್ನಿಂದ “ಪ್ರತಿಭಾವಂತ ಯುವಕ” ಪ್ರಶಸ್ತಿ.
1987ರಲ್ಲಿ ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ. ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಮೃತೋತ್ಸವ ಪ್ರಶಸ್ತಿ.
1987ರಲ್ಲಿ ಕವಿ ಮುದ್ದಣ ಸ್ಮಾರಕ ರಚನೆಗಾಗಿ ಡಾ. ಶಿವರಾಮ ಕಾರಂತರಿಂದ ಹುಟ್ಟೂರ ಸನ್ಮಾನ.1991ರಲ್ಲಿ ಕರ್ನಾಟಕ ಜೇಸಿಸ್ ರಾಜ್ಯ ಪ್ರಶಸ್ತಿ.
1992ರಲ್ಲಿ ಉದಯವಾಣಿ ವಿಂಶತಿ ಪ್ರಶಸ್ತಿ.
1993ರಲ್ಲಿ “ಕೃಷ್ಣಾನುಗ್ರಹ ಪುರಸ್ಕಾರ”, ಪರ್ಯಾಯ ಶ್ರೀ ಪುತ್ತಿಗೆ ಮಠ.
1995ರಲ್ಲಿ ಬೆಳ್ಮಣ್ಣು ಲಯನ್ಸ್ ಕ್ಲಬ್ ಪುರಸ್ಕಾರ.
1996ರಲ್ಲಿ ಸಂದೇಶ ರಾಜ್ಯ ಪ್ರಶಸ್ತಿ.
1997ರಲ್ಲಿ ಕಾಂತಾವರದಲ್ಲಿ ಜರಗಿದ ಕಾರ್ಕಳ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ.
ವಂಜಾರ ಕಟ್ಟೆಯಲ್ಲಿ ನಾಗರಿಕ ಸನ್ಮಾನ.
1998ರಲ್ಲಿ ಗ್ರಾಮೀಣ ದೂರ ಸಂಪರ್ಕ ಸೇವೆಗಾಗಿ ರಾಮ ಸನ್ಮಾನ ಮತ್ತು ಚೆನ್ನೈ ಸಮಾರಂಭದಲ್ಲಿ ಸನ್ಮಾನ.
1998ರಲ್ಲಿ ಮುದ್ದಣ 125 ಸಂಸ್ಮರಣೆ ಉಡುಪಿಯಲ್ಲಿ ಕುಶಿಯವರಿಂದ ಸನ್ಮಾನ.
2004ರಲ್ಲಿ “ಸಾಂಸ್ಕøತಿಕ ಶ್ರೀ” ಪುರಸ್ಕಾರ ಪಂಪ ಪ್ರತಿಷ್ಠಾನ ದಾವಣಗೆರೆ.
2005ರಲ್ಲಿ ಸಿದ್ಧಯ ಪುರಾಣಿಕ ಪುರಸ್ಕಾರ.
2005ರಲ್ಲಿ ಬೆಳ್ಳಿ ಸಂಭ್ರಮ, ನಂದಳಿಕೆ ಹುಟ್ಟೂರ ಸನ್ಮಾನ.
2005ರಲ್ಲಿ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.
2006ರಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಪುರಸ್ಕಾರ.
2006ರಲ್ಲಿ ಅಮೇರಿಕಾ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಮುದ್ದಣನ ಶ್ರೀ ಮತ್ತು ರಾಮಾಶ್ವಮೇಧಂ ಲೋಕಾರ್ಪಣೆ -ಸನ್ಮಾನ.
2006ರಲ್ಲಿ ಅಮೇರಿಕಾ ನ್ಯೂಜೆರ್ಸಿ ಶ್ರೀಕೃಷ್ಣ ಬೃಂದಾವನದಲ್ಲಿ ಸನ್ಮಾನ.
2007ರಲ್ಲಿ ಮುಂಬಯಿ ಪೂವಾಯಿ ಕನ್ನಡ ಸಂಘ ‘ಸಮಾಜರತ್ನ ಪ್ರಶಸ್ತಿ.
2008ರಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಸನ್ಮಾನ.
2009ರಲ್ಲಿ ಶ್ರೀ ಸುಬ್ರಹ್ಮಣ್ಯ ಸಭಾ ಶತಮಾನೋತ್ಸವ ಪುರಸ್ಕಾರ.
2010ರಲ್ಲಿ ಶ್ರೀ ಕ್ಷೇತ್ರ ಸೂಡ ಸ್ಕಂದ ರಜತ ಪುರಸ್ಕಾರ.
2011ರಲ್ಲಿ ಶ್ರೀ ಕ್ಷೇತ್ರ ಪಾವಂಜೆ ಹರಿಭಟ್ ಪುರಸ್ಕಾರ.
2012ರಲ್ಲಿ ಕಾಂತಾವರ ಕನ್ನಡ ಸಂಘದ ಸನ್ಮಾನ.
2013ರಲ್ಲಿ ಶ್ರೀ ಪೇಜಾವರ ಸ್ವಾಮೀಜಿ ಅವರಿಂದ ಸನ್ಮಾನ.
2013ರಲ್ಲಿ ಕಲ್ಕೂರ ಪ್ರಶಸ್ತಿ – ಕಲ್ಕೂರ ಪ್ರತಿಷ್ಠಾನ ರವರಿಂದ
2014ರಲ್ಲಿ ನಂದಳಿಕೆ ಐಸಿರಿ ಸನ್ಮಾನ – ಕರ್ಣಾಟಕ ಬ್ಯಾಂಕ್ ಅಧ್ಯಕ್ಷ /ಆಡಳಿತ ನಿರ್ದೇಶಕರಿಂದ
2015ರಲ್ಲಿ ಮುದ್ದಣ ಪ್ರಶಸ್ತಿ ಯಕ್ಷಮಿತ್ರ ಕಿನ್ನಿಕಂಬಳ ಅವರಿಂದ
2015ರಲ್ಲಿ ಯಕ್ಷಲಹರಿ ರಜತ ಪುರಸ್ಕಾರ
2015ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಾಧಕ ಗೌರವ.
ಸಾರ್ವಜನಿಕ ಸಂಪರ್ಕ:
ಸ್ಥಾಪಕ ಗೌರವಾಧ್ಯಕ್ಷ – ರಜತ ಸಂಭ್ರಮದ ನಂದಳಿಕೆಯ ಕವಿ
ಮುದ್ದಣ ಸ್ಮಾರಕ ಮಿತ್ರಮಂಡಳಿ, ನಂದಳಿಕೆ
ಗೌರವ ನಿರ್ದೇಶಕ – ಮುದ್ದಣ ಅಧ್ಯಯನ ಕೇಂದ್ರ, ನಂದಳಿಕೆ
ಗೌರವ ನಿರ್ದೇಶಕ – ಕಾಂತಾವರ ಕನ್ನಡ ಸಂಘ
ಸದಸ್ಯ – ದೂರÀವಾಣಿ ಸಲಹಾ ಸಮಿತಿ, ಕರ್ನಾಟಕ ವೃತ್ತ, ಬೆಂಗಳೂರು.
ಗೌರವ ನಿರ್ದೇಶಕ – ಶ್ರೀ ಸುಬ್ರಹ್ಮಣ್ಯ ಸಭಾ ಮಂಗಳೂರು.
ಮಾಜಿ ಉಪಾಧ್ಯಕ್ಷ – ವರ್ಧಮಾನ ಪ್ರಶಸ್ತಿ ಪೀಠ, ಮೂಡಬಿದ್ರೆ
ಕೃತಿಗಳು ಮತ್ತು ಗ್ರಂಥ
ಸಂಪಾದನೆ :ನಂದಳಿಕೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಪರಿಚಯ ಸಹ ಸಂಪಾದಕ
‘ಮುದ್ದಣನಿಗೆ ನಮನ ಗ್ರಂಥ ಸಹ ಸಂಪಾದಕ’
ನಂದಳಿಕೆಯ ನಂದಾದೀಪಗಳು – ಸಂಪಾದಕ
ನಂದಳಿಕೆಯ ನಂದನ – ಸಂಪಾದಕ
ಗುರುನಮನ – ಸಂಪಾದಕ
ಮುದ್ದಣ ಪುರಸ್ಕಾರ- ಸಹ ಸಂಪಾದಕ
ನಂದೊಳಿಗೆದ ಮುದ್ದಣೆ ಬದುಕು ಸಾಧನೆ – ಸಂಪಾದಕ (ಕರ್ನಾಟಕ ತುಳು ಸಾಹಿತ್ಯ ಅಕಾಡಮಿ) ಪ್ರಕಟನೆ
ತೆಕ್ಕುಂಜ ಗೋಪಾಲಕೃಷ್ಣ ಭಟ್ಟ ಬದುಕು ಸಾಧನೆ – ಸಂಪಾದಕ (ಕಾಂತಾವರ ಕನ್ನಡ ಸಂಘ ನುಡಿ ನಮನ ಮಾಲಿಕೆ ಪ್ರಕಟಣೆ
ಬೆನೆಗಲ್ ರಾಮ್ರಾವ್ ಬದುಕು – ಸಾಧನೆ – ಸಂಪಾದಕ (ಕಾಂತಾವರ ಕನ್ನಡ ಸಂಃ ನುಡಿ ನಮನ ಮಾಲಿಕೆ ಪ್ರಕಟಣೆ (ಅಚ್ಚಿನಲ್ಲಿ)
ಸ್ಮರಣ ಸಂಚಿಕೆ: ಮನೋರಮ ಮತ್ತು ಮುದ್ದಣ ಸ್ಮರಣ ಸಂಚಿಕೆಗಳ ಸಹ ಸಂಪಾದಕ : ಮುದ್ದಣನ ಶ್ರೀ ರಾಮಾಶ್ವಮೇಧ ಗ್ರಂಥ ಮರುಮುದ್ರಣ, ಕುಮಾರ ವಿಜಯ, ರತ್ನಾವತಿ ಕಲ್ಯಾಣ, ಅರ್ಥಸಹಿತ ಪ್ರಕಟಣೆ ಧ್ವನಿಸುರುಳಿ, ಮುದ್ದಣ ಪುರಸ್ಕಾರ ಸಿ.ಡಿ. ನಿರ್ಮಾಣ.
“ಮುದ್ದಣ ಬದುಕು ಬರಹ” “ಮುಂಗೋಳಿ ಕೂಗಿತು” ಮುಕ್ಕಾಲು ಪದ್ಯಗಳು ನಂದಳಿಕೆ ಐಸಿರಿ ದರ್ಶನ, ಮುದ್ದಣ ಬದುಕು ಬರಹ ತುಳು ಪುಸ್ತಕ, ಪ್ರೋ ತೆಕ್ಕುಂಜ ಗೋಪಾಲಕೃಷ್ಣ ಭಟ್ ಬದುಕು ಸಾಧನೆ, ಪುಸ್ತಕ ಪ್ರಕಟಣೆ, ಮುದ್ದಣನ ಸಂಪ್ರದಾಯದ ಹಾಡುಗಳು, ಧ್ವನಿ ಸುರುಳಿ, ಸಿ.ಡಿ. ನಿರ್ಮಾಣ.
ಪ್ರಕಟಣೆ : ಮುದ್ದಣನ ಶ್ರೀ ರಾಮ ಪಟ್ಟಾಭಿಷೇಕ ಮತ್ತು ಮುದ್ದಣ ಮನೋರಮಾ ಸರಸ ಸಲ್ಲಾಪ ವಾಚನ, ವ್ಯಾಖ್ಯಾನ – ವಾದನ ಸಿಡಿ ನಿರ್ಮಾಣ, ಮುದ್ದಣ ಗೇಯ ಸೌಂದರ್ಯ- 173 ಅಪೂರ್ವ ಯಕ್ಷಗಾನ ಹಾಡುಗಳ ಸಿಡಿ ನಿರ್ಮಾಣ.
ವಿದೇಶ ಪ್ರವಾಸ: ಅಮೇರಿಕಾ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ವಿಶೇಷ ಆಹ್ವಾನಿತರಾಗಿ ಶ್ರೀ ರಾಮಾಶ್ವಮೇಧ ಲೋಕಾರ್ಪಣೆ ಪ್ರಬಂಧ ಮಂಡನೆ. ಲಂಡನ್, ನ್ಯೂಯಾಕ್, ನ್ಯೂಜೆರ್ಸಿ, ವಾಷಿಂಗ್ಟನ್, ಬಾಲ್ಟಿಮೋರ್ ಕನ್ನಡ ಸಂಘಟನೆಗಳಿಗೆ ಸಂದರ್ಶನ.
ಅಪೂರ್ವ ಸಂಗ್ರಹ :
28 ವರ್ಷ ಕನಸಿನ ಕವಿ ಮುದ್ದಣ ಸ್ಮಾರಕದ ‘ನಂದಳಿಕೆ ನಡೆದ ನಡಿಗೆ’
1990ರಲ್ಲಿ 30 ವರ್ಷಗಳ ಕಡತ ಸಂಗ್ರಹ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ಹಸ್ತಾಂತರ.
ಸಂಸಾರ: ಶ್ರೀಮತಿ ಎನ್. ವಿಜಯಲಕ್ಷ್ಮಿ ಬಿ. ರಾವ್, ಪತ್ನಿ, ಕು.ಸೌಜನ್ಯ ನಂದಳಿಕೆ ಮಗಳು,
ಸಂಪರ್ಕ ವಿಳಾಸ:
ಮುದ್ದಣ ಪ್ರಕಾಶನ, ‘ಮುದ್ದಣ ಚಾವಡಿ’
ಆಶೀರ್ವಾದ ಆವರಣ, ಚರ್ಚ್ ರಸ್ತೆ, ಬಿಜೈ,
ಮಂಗಳೂರು – 575004. ಕರ್ನಾಟಕ, ಇಂಡಿಯಾ.
ದೂರವಾಣಿ: +91-824-2495495
ಮೊಬೈಲ್: +91 94481 44495 ಹಾಗೂ +91 94824 96954
‘ಐಸಿರಿ’ ನಂದಳಿಕೆ ಅಧ್ಯಯನ ಕೇಂದ್ರ
ಕವಿಮುದ್ದಣ ಮಾರ್ಗ, ಅಂಚೆ ನಂದಳಿಕೆ- 576 111
ಕಾರ್ಕಳ ತಾಲೂಕ್, ಉಡುಪಿ ಜಿಲ್ಲೆ
ದೂರವಾಣಿ: +91 97408 76495 ಹಾಗೂ +91 97418 01855